ಸಂಪರ್ಕಿಸಿ 08155-284661

ಮಾಹಿತಿ ಕಳುಹಿಸಿ acharyacollege@gmail.com

ಸ್ಥಳ ಆಚಾರ್ಯ ಪ್ರಥಮ ದರ್ಜೆ ಮಹಿಳಾ ಕಾಲೇಜು
ಗೌರಿಬಿದನೂರ್-561208, ಚಿಕ್ಕಬಳ್ಳಾಪುರ-ಜಿಲ್ಲೆ

#

ನಮ್ಮ ಆಚಾರ್ಯ ಪ್ರಥಮ ದರ್ಜೆ ಮಹಿಳಾ ಕಾಲೇಜು

ನಮ್ಮ ಆಚಾರ್ಯ ಪ್ರಥಮ ದರ್ಜೆ ಮಹಿಳಾ ಕಾಲೇಜು 1982 ರಲ್ಲಿ ಪ್ರಾರಂಭವಾಗಿದ್ದು ಇಂದಿಗೆ 39 ವರ್ಷಗಳಾಗಿವೆ . ನಮ್ಮ ಕಾಲೇಜು ಹಲವಾರು ಸತ್ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡಿದೆ. ಭಾರತೀಯ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಪಾರಂಪರಿಕ ಸಂಪ್ರದಾಯವನ್ನು ಸಾಧ್ಯವಾದಷ್ಟು ಅನುಷ್ಠಾನಕ್ಕೆ ತರುತ್ತಿದ್ದೇವೆ.

1982ರಿಂದ 2018 - ಈ 36 ವರ್ಷಗಳ್ಲಲಿ ಸಾವಿರಾರು ವಿದ್ಯಾರ್ಥಿನಿಯರು ಬಿಏ., ಬಿ.ಕಾಂ., ಪದವಿ ಪಡೆದು, ಉನ್ನತ ವಿದ್ಯಾಭ್ಯಾಸ ಮಾಡಿ ವ್ಯವಸ್ಥಿತ ಬದುಕನ್ನು ಹೊಂದಿದ್ದಾರೆ. ಪ್ರಾರಂಭದಲ್ಲಿ ನಮ್ಮಲಿ ವಿದ್ಯಾಭ್ಯಾಸ ಮಾಡಿದ ಹೆಣ್ಣು ಮಕ್ಕಳ ಇಂದು ನಮ್ಮಲಿಯೇ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಗೋಡೆ ಪತ್ರಿಕೆ ಅನಂತರ ಕೈಬರಹದ "ಶಮ" ಪತ್ರಿಕೆ ಪ್ರಕಟವಾಗುತ್ತಿದು ವಿದ್ಯಾರ್ಥಿನಿಯರಲ್ಲಿ ಇರುವ ಸೂಪ್ತ ಪ್ರತಿಭೆಗಳು ಬೆಳಕಿಗೆ ಬರಲು ಇದು ನೆರವಾಗಿದೆ. ಇಂದು ಕರ್ನಾಟಕದಲ್ಲಿ ಲೇಖಕಿಯಾಗಿ ಗುರ್ತಿಸಿಕೊಂಡಿರುವ ರೂಪ ಹಾಸನ ನಮ್ಮ ಕಾಲೇಜಿನ ವಿದ್ಯಾರ್ಥಿನಿ 1989-90, ಸಾಲಿನ ಬಿ.ಕಾಂ.

ವಿದ್ಯಾರ್ಥಿನಿ ಇಂದು ಹಲವು ಪ್ರಶಸ್ತಿ ಪಡೆದು ಉತ್ತಮ ಸಾಹಿತ್ಯ ರಚಿಸುತ್ತಿದ್ದಾರೆ. ಸುಷ್ಮಾ ವಿಕ್ರಮ ಎನ್ನುವ ವಿದ್ಯಾರ್ಥಿನಿ ಪ್ರಾಥಮಿಕ ಶಾಲೆಯ ನಲಿ-ಕಲಿ ವಿಭಾಗದ ಪಠ್ಯಗಳನ್ನು ರಚಿಸಿ ಹಲವಾರು ಲೇಖನಗಳ ಭಾಷಾಂತರ ಕಾರ್ಯ ಮಾಡುತ್ತಿದ್ದಾರೆ.ಅನ್ಸಾರಿ ಮೊಯಿನ್ ಎಂಬ ಬಿ. ಏ. ವಿದ್ಯಾರ್ಥಿನಿ ಶಿಕ್ಷಕಿಯಾಗಿ, ಕವಿಯಿತ್ರಿಯಾಗಿ ಗುರ್ತಿಸಿಕೊಂಡಿದ್ದಾರೆ. ಇನ್ನು ಸುಗಮ ಸಂಗೀತ ಹಾಗು ಶಾಸ್ತ್ರೀಯ ಸಂಗೀತದಲ್ಲಿ ಶ್ರೀಮತಿ ಗಾಯಿತ್ರಿ ಹಾಗು ಶ್ರೀಮತಿ ಲಕ್ಷ್ಮಿ ಹೆಸರುಗಳಿಸಿದ್ದಾರೆ. ವಿದ್ವತ್ತಿನ ಪ್ರೋಡಿಮೆ ಹೊಂದಿರುವ ಶ್ರೀಮತಿ ಪಿ.ವಿ.ಪೂರ್ಣಿಮಾ ಇಂದು ಬಿ.ಬಿ.ಎಂ.ಪಿ ಯಲ್ಲಿ ಏ. ಸಿ. (Assistant Commissioner) ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಗೌರಿಬಿದನೂರು ತಾಲ್ಲೂಕಿನ ಸುತ್ತಮುತ್ತ ಇರುವ ಪ್ರೌಢಶಾಲೆ, ಮಾಧ್ಯಮಿಕ ಶಾಲೆ ಹಾಗೂ ಕಾಲೇಜುಗಳಲ್ಲಿ ಸಾಕಷ್ಟು ನಮ್ಮ ವಿದ್ಯಾರ್ಥಿನಿಯರು ಶಿಕ್ಷಕಿಯರಾಗಿ ಉಪನ್ಯಾಸಕಿಯರಾಗಿ ಸೇವೆ ಸಲ್ಲಿಸುತ್ತಾ ನಮ್ಮ ಕಾಲೇಜಿನ ಹೆಮ್ಮೆಯ ಪ್ರತೀಕಗಳಾಗಿದ್ದಾರೆ. ಇಂದಿನ ವಿದ್ಯಾರ್ಥಿನಿಯರ ಸೂಪ್ತ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಕೆಲವು ಕಾಲ ನಿಂತು ಹೋಗಿದ್ದ ನಮ್ಮ ಕಾಲೇಜಿನ ಪರ್ತಿಕೆ ಕಳೆದ ವರ್ಷದಿಂದ 'ವಿವೇಕ' ಎನ್ನುವ ಹೆಸರಿನೊಂದಿಗೆ ಹೊರ ಬರುತ್ತಿದೆ .

'ವಿವೇಕ 'ಪತ್ರಿಕೆ ಸುಂದರವಾಗಿ ಮೂಡಿ ಬರಲು ಕಾರಣರಾದ ನಮ್ಮ ಕಾಲೇಜಿನ ಎಲ್ಲಾ ಅಧ್ಯಾಪಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು (ಆಡಳಿತ ಮಂಡಳಿ ) ಅಭಿನಂದಿಸುತ್ತಾ ನಮ್ಮ ಕಾಲೇಜು ಪತ್ರಿಕೆ ಇನ್ನು ಮುಂದೆ ಪ್ರತಿ ವರ್ಷ ಹೊಸ ಹೊಸ ಚಿಂತನೆಯೊಡನೆ ವಿಷಯಗಳೊಡನೆ ಹೊರ ಬರುತ್ತಿದೆ. ನಮ್ಮ ವಿದ್ಯಾರ್ಥಿನಿಯರ ಸೂಪ್ತ ಪ್ರತಿಭೆ ಹೊರ ಬರಲು ಈ ಪತ್ರಿಕೆ ಒಂದು ವೇದಿಕೆಯಾಗಲಿ ಎಂದು ಆಶಿಸುತ್ತೇನೆ.


ಡಾ. ಜಿ. ಎ. ಸುದರ್ಶನ್

ಪ್ರಾಂಶುಪಾಲರು